Tuesday, August 22, 2006
















ಕಕ್ಕಿ-ನೆಕ್ಕಿದಂತೆ

ಸರಸವಿಲ್ಲದ
ಪ್ರೇಮಪತ್ರ ವಾಚನ
ರಸಿಕತೆಯಿಲ್ಲದವಳೊಂದಿಗೆ
ಜೀವನಯಾನ,
ಎರಡೂ
ತಿಂದ ಮರುಕ್ಶಣವೇ ಕಕ್ಕಿದಂತೆ..!
ಅಥವಾ
ಉಂಡೆಸೆದ ಎಲೆಯ ನಾಯಿ ನೆಕ್ಕಿದಂತೆ...!

-ಆಂಜನೇಯ ಎಸ್. ಆರ್.
ಕುಂಚ-ಪ್ರಪಂಚ

ಕೈಯ್ಯಲ್ಲಿರುವುದು ಕೇವಲ
ಹನ್ನೆರಡಿಂಚಿನ ಕುಂಚ,
ಅತ್ತಿತ್ತ ಹರಿದಾಡಿದರೂ ಸಾಕು
ಬಣ್ಣಗಳೇ ಮೈನೆರೆದಿರುವದೀ ಪ್ರಪಂಚ!
-ಆಂಜನೇಯ ಎಸ್. ಆರ್.
ಗಾಳಿಪಟ

"ನೆನಪಿನಾಕಾಶದಲ್ಲಿ
ಗಾಳಿಪಟಗಳೊಂದಿಗೆ
ಮತ್ತೆ ಹಾರಿಸುವಾಸೆ,
ಆ ಎಳೆ ವಯಸಿನ
ತುಂಟ ತರಲೆಗಳನ್ನು
ಆ ಹಸಿ ಮನಸಿನ
ಪುಟ್ಟ ಕನಸುಗಳನ್ನು...!"

-ಆಂಜನೇಯ ಎಸ್. ಆರ್.

ಸಾಗರದೆಡೆಗೆ....

"ನಿಂತಲ್ಲೆ ಬಿತ್ತಿ ಬೆಳೆಯಲು
ಜೀವನವೇನು ನಿಂತ ನೀರೇ?
ಹರಿಯುತಿದೆ
ನೀನು ಚಲಿಸುತಿರು,
ಶಕ್ತಿ ಇರುವ ತನಕ
ಮುಕ್ತಿ ದೊರೆಯುವ ತನಕ......"

-ಆಂಜನೇಯ ಎಸ್. ಆರ್.









ಇಲ್ಲದಿದ್ದರೆ...

ರೆಪ್ಪೆ ಮುಚ್ಚಿದರೂ
ಕಣ್ಣುಮುಚ್ಚಾಲೆ ಆಡುವ
ಆ ಕನಸು
ನಿನ್ನದ್ದಾಗಿದ್ದಕ್ಕೆ
ಸುಮ್ಮನಿದ್ದ್ದೇನೆ.....

-ಆಂಜನೇಯ ಎಸ್. ಆರ್.









ತಪಸ್ಸು....?

ಎಲ್ಲರೂ ವಿಶ್ವಾಮಿತ್ರರೇ
ಮೇನಕೆ ಬರುವ ತನಕ,
ನಾನೂ ವಿಶ್ವಾಮಿತ್ರನೇ
ಎಂದು ಬರುವಳು ನನ್ನ ಮೇನಕ...!?

-ಆಂಜನೇಯ ಎಸ್. ಆರ್.
ಮುಗುಳ್ನಗೆಯ ಮಳೆ

ಸುಟ್ಟು ಕರಕಲಾಯಿತು
ಒಣಮನಸು
ವಿರಹದ ಕಾಡ್ಗಿಚ್ಚಿಗೆ,
ಮತ್ತೆ ಉಸಿರಾಡಿ
ಹಸಿರಾಯಿತು
ಆ ನಿನ್ನ ಮುಗುಳ್ನಗೆಯ
ಮೊದಲ ಮಳೆಗೆ..

-ಆಂಜನೇಯ ಎಸ್. ಆರ್.


ಇವಳಿಗಿಂತ..

ಎದುರಾದರೂ
ತಿರುಗಿ ನೋಡದ
ಇವಳಿಗಿಂತ
ನಾ ಹೇಳಿದಂತೆ ಕುಣಿವ
ಅವಳ ನೆನಪೇ ವಾಸಿ...!

-ಆಂಜನೇಯ ಎಸ್. ಆರ್.









ನಿರೀಕ್ಷೆ

ತಿಂಗಳ
ಬೆಳದಿಂಗಳೊಡಲಲ್ಲಿ
ಅವಳಿಗೆಂದೆ ಕಾಯುತ್ತಿದ್ದೆ
ಮತ್ತೆ ಬರುವಳೆಂದು
ಮೈಮನಗಳ ಬಿಸಿಯೆರಿಸಲು....

-ಆಂಜನೇಯ ಎಸ್. ಆರ್.






ಓಲಾಟ

ತೇಲುವ ದೋಣಿಯಲಿ
ಓಲಾಡುವ ಆಟ!
ಓಡುವ ಕಾಲದಲಿ
ಬದುಕಿನ ಓಲಾಟ!

-ಆಂಜನೇಯ ಎಸ್. ಆರ್.
ಚೇತಕ್ ನಿಗೆ...

ಯಾರದೋ ಜಾಗ
ಮತ್ತಿನ್ಯಾರದೋ ಬೆಂಚು ,
ಒತ್ತರಿಸಿ ಸಿಂಗರಿಸಿದವರು ಅವರು...ಅವನು
ಇಷ್ಟಾದರೂ ಜೊತೆಗಾರನೆಂದು
(ವಿಧಿಯಿಲ್ಲದೆ) ಕರೆದುಕೊಟ್ಟರೂ ಸಹ
ತಿರುಗಿ ಕೂತವ ಮಾತ್ರ ಇವನು..!

-ಆಂಜನೇಯ ಎಸ್. ಆರ್.
ಉಯ್ಯಾಲೆ

"ನಾಲ್ಕು ಗೋಡೆಗಳನ್ನೂ ದಾಟಿ
ಜೀಕುವ ಆಸೆ
ನೀರಿನಲೆಗಳ ಮೇಲೆ
ಬಂಧನಗಳನ್ನೂ ಮೀರಿ
ತೂಗುವ ಬಯಕೆ,
ಕನಸುಗಳ ಉಯ್ಯಾಲೆ!"

-ಆಂಜನೇಯ ಎಸ್. ಆರ್.





ವಕ್ರನೋಟ

"ಸರಳರೇಖೆಗಳಿಗಿಂತ
ಕೆಲವೊಮ್ಮೆ
ವಕ್ರತೆಯ ಮೇಲೆ
ಹೆಚ್ಚು ಮೋಹ,
ಉದಾಹರಣೆಗೆ
ನನ್ನವಳ ದೇಹ.."

-ಆಂಜನೇಯ ಎಸ್. ಆರ್.











ಇಂದಾದರೂ...
ಒಂದಾದರೂ ಚಿಗುರೊಡೆಯಬಹುದೆಂದು
ಅಂದಿನಿಂದಲೂ ಕಾದು ಕುಳಿತಿದ್ದೆ,
ಮುಣ್ದಿರುವ ತುಂಡಾದ ಕಾಂಡಗಳ ನೋಡುತ್ತಎಂದೊ
ಮಣ್ಣೊಳಗೆ ಸತ್ತು ಮಲಗಿರುವಬೆಂದ ಬೇರುಗಳ ಮೇಲೆ...

-ಆಂಜನೇಯ ಎಸ್. ಆರ್.