Tuesday, August 22, 2006
ಇಂದಾದರೂ...
ಒಂದಾದರೂ ಚಿಗುರೊಡೆಯಬಹುದೆಂದು
ಅಂದಿನಿಂದಲೂ ಕಾದು ಕುಳಿತಿದ್ದೆ,
ಮುಣ್ದಿರುವ ತುಂಡಾದ ಕಾಂಡಗಳ ನೋಡುತ್ತಎಂದೊ
ಮಣ್ಣೊಳಗೆ ಸತ್ತು ಮಲಗಿರುವಬೆಂದ ಬೇರುಗಳ ಮೇಲೆ...

-ಆಂಜನೇಯ ಎಸ್. ಆರ್.

8 comments:

ಭಾವಜೀವಿ... said...

ಪ್ರಮೋದ ಅವರೆ..
ನಿಮ್ಮ ಚಂದದ ಚಿತ್ರಕ್ಕೆ ನನ್ನ ಮನಕ್ಕೆ ದಕ್ಕಿದ ವಿಚಿತ್ರ ಸಾಲುಗಳು...!!
ಹೊಂದಿಕೆ ಎಷ್ಟರಮಟ್ಟಿಗೋ ಗೊತ್ತಿಲ್ಲ....!!

ಇತ್ತೀಚಿಗೆ ನನ್ನ ನಾಡಿಯೇ ನಿಂತು ಹೋಗಿದೆ
ಯಾರಾದರೂ ಮರಗಳಡಿಯಲ್ಲಿ ನನ್ನ ಹೂತುಹೋಗಿ
ಅಲ್ಲಿಯೇ ಸ್ವಲ್ಪ ಗಾಳಿಯಾದರೂ ದಕ್ಕೀತು
ನನ್ನಿಂದ ಹೊಸ ಚಿಗುರಾದರೂ ಸಿಕ್ಕೀತು

ನನ್ನ ಬ್ಲಾಗ್ ಸ್ಪಾಟ್..
http://bhaavajeevi.blogspot.com/

Anonymous said...

Hi,
Mr.Pramod, your talent is mindblowing. I loved your kavithe and paintings. Meaningfull, close to heart, I loved every one of them. Thanx to Manu who suggested your blog. Keep it up.

Venkat
brvenkatesh2006@gmail.com

Pramod P T said...

ಭಾವಜೀವಿಯವರೇ,
blog-ಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮೀ ಕವನವೇ ಹೇಳುತ್ತಿದೆ.. ನೀವು ನಿಜವಾಗಲೂ ಭಾವಜೀವಿಯೇ. ನಿಮ್ಮ ಮತ್ತು ಆಂಜನೆಯನ ಕವಿತೆಗಳು ಚಿತ್ರಕ್ಕೆ ಹೋಲಿಕೆಯಾದರೂ ಸಾಲುಗಳಲ್ಲಿನ ನಿಜವಾದ ತಾತ್ಪರ್ಯವೇ ಬೇರೆ ಅನ್ನಿಸ್ತಿದೆ. ಕವಿ ಹ್ರದಯವೇ ಹಾಗೆ..:)

Pramod P T said...

Hi Venkat,

Good day.
Thanks for visiting my blog and having look into paintings and sketches. Thanks for your pleasurable comments.
Those poems are written by my friend Anjaneya S. R. He must be appreciated. I used to sketch for all his poems. Posted some of them.

Pramod

ಕುಮಾರ ಸ್ವಾಮಿ ಕಡಾಕೊಳ್ಳ said...
This comment has been removed by the author.
shivu K said...

ಪ್ರಮೋದ ಅವರೇ.. ನನಗೆ ನಿಮ್ಮ ಚಿತ್ರ-ಕಾವ್ಯದ ಎಲ್ಲಾ ಬರವಣಿಗೆಗಳು ಇಷ್ಟವಾಯ್ತು. ಹಾಗು ಅದಕ್ಕೂ ಮೀರಿ ನಿಮ್ಮ ಚಿತ್ರ ಇಷ್ಟ ಆಯ್ತು. ವಿಷಯ ಕೊಟ್ಟರೆ ಚಿತ್ರವನ್ನು ಚೆನ್ನಾಗಿ ಬರೆಯುತ್ತೀರಿ. ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

ಮತ್ತೊಂದು ವಿಷಯ ನಾನು ಛಾಯಾ ಚಿತ್ರಗ್ರಾಹಕನಾದರೂ ನನ್ನ ವೃತ್ತಿ ದಿನಪತ್ರಿಕೆ ವಿತರಣೆ. ಮುಂಜಾನೆ ಎಲ್ಲರೂ ಮಲಗಿರುವಾಗ ನಡೆಯುವ ಚಟುವಟಿಕೆ. ನೀವೆಂದು ಕಾಣದ ಒಂದು ಮಾಯಾಲೋಕವನ್ನು ತೋರಿಸಲಿಕ್ಕಾಗಿ ನಾನು ಅದರ ಬಗ್ಗೆ ಲೇಖನ ಬರೆಯುತ್ತಿದ್ದೇನೆ. ಅದಕ್ಕೆ ಫೋಟೊಗಳಿಗಿಂತ ನಿಮ್ಮ ರೀತಿಯ ಚಿತ್ರಗಳೇ ಸೂಕ್ತವೆಂದು ನನಗನ್ನಿಸುತ್ತದೆ. ನನ್ನ ಹೊಸ ಬರವಣಿಗೆಯನ್ನ್ಹು ಮತ್ತೊಂದು ಬ್ಲಾಗಿನಲ್ಲಿ ಬರೆಯುತ್ತಿದ್ದೇನೆ. ನೀವೊಮ್ಮೆ ಆ ಬ್ಲಾಗಿಗೆ ಹೋಗಿ ನನ್ನ ಲೇಖನಗಳನ್ನು ಓದಿದರೆ ನಿಮಗೆ ಒಂದು ಐಡಿಯಾ ಸಿಗುತ್ತದೆ. ದಯವಿಟ್ಟು ನಿಮ್ಮಿಂದ ಈ ಸಹಾಯ ಸಾಧ್ಯವೇ? ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ.
ನನ್ನ ಹೊಸ ಬ್ಲಾಗ್ ವಿಳಾಸ:
http://camerahindhe.blogspot.com/
ಶಿವು.ಕೆ

Pramod P T said...

ನಮಸ್ಕಾರ ಶೀವು,
ಹೇಗಿದ್ದೀರಿ. ತುಂಬಾ ಸಂತೋಷ ನೀವು ಬ್ಲಾಗ್ ಮೂಲಕ ಭೇಟಿಯಾಗಿದ್ದಕ್ಕೆ ಹಾಗು ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮೇಲ್ಲ ಛಾಯಾಚಿತ್ರಗಳ ಕಲ್ಪನೆ ಅಧ್ಬುತವಾಗಿವೆ. ಬರಹಗಳನ್ನ ಓದಿ ನಿಮ್ಮ ಬ್ಲಾಗ್ನಲ್ಲೇ ಕಮೇಂಟಿಸುತ್ತೇನೆ.

namma sahithya said...

pandu

salu salugala padagalalu balu romancana